ಸಮಾಜದ ಕ್ಷೇಮಕ್ಕಾಗಿ ನಿಲ್ಲಲ್ಲು, ಮೊದಲು ನೀವು ಮೊಣಕಾಲುಗಳ ಮೇಲೆ ಪ್ರಾರ್ಥಿಸಿರಿ.

ಒಬ್ಬ ವಿಶ್ವಾಸಿಯೂ ತನ್ನ ಬೀದಿಗಾಗಿ ಪ್ರಾರ್ಥಿಸಿದರೆ ಏನು?


ನಿರಾಶೆಯಲ್ಲಿ ನಿಮ್ಮ ಕೈಗಳನ್ನು ಚಾಚದೆ ಪ್ರಾರ್ಥನೆಯಲ್ಲಿ ಅವುಗಳನ್ನು ಒಟ್ಟಾಗಿ ಸೇರಿಸಿರಿ.


ಸಮಸ್ಯೆ

ಅಶಕ್ತತೆ ಹಾಗೂ ಕತ್ತಲು ಪ್ರತಿಯೊಂದು ಬೀದಿ ಮೂಲೆಗಳಲ್ಲಿ ಹುದುಗಿದೆ. ಕುಡಿತ, ವಿವಾಹ ವಿಚ್ಛೇಧನ, ದುರುಪಯೋಗ, ಸಾಲ, ಮನಗುಂದುವಿಕೆ ಹಾಗೂ ಅನೇಕ ದುಷ್ಟತನ ನಿಮ್ಮ ಮನೆ ಹಾಗೂ ಜೀವಿತವನ್ನು ಹರಿದು ಹಾಕಿವೆ. ಇದು ಬರೀ ಅಂಕಿ ಸಂಖ್ಯೆ ಮಾತ್ರವಲ್ಲ. ಇವುಗಳು ಅಪರಿಚಿತವಲ್ಲ. ಇವು ನಮ್ಮ ಪರಿಸರದಲ್ಲಿ ನಡೆಯುತ್ತಿರುವ ಸಂಗತಿಗಳು. ಕ್ರೈಸ್ತರಾದ ನಾವು ಈ ಸನ್ನಿವೇಶಗಳಲ್ಲಿ ಯಾವುದೇ ಅನುತಾಪವಿಲ್ಲದವರಾಗ್ಗಿದ್ದೇವೆ. ಈ ಪರಿಸ್ಥಿತಿಯಿಂದ ವಿಮೋಚನೆ ಹೊಂದಲು ಸಾಧ್ಯವಿಲ್ಲ ಎಂಬ ವಿರೋಧಿಯು ಹೇಳುವ ಸುಳ್ಳನ್ನು ನಂಬಿದ್ದೇವೆ. ಆದರೆ ನಾವು ನಮ್ಮ ಸುತ್ತ ಮುತ್ತ ನೋಡಿ ಮನ ಸೋಲದೆ ನಮಗೊಂದು ಉನ್ನತ ಕರೆ ಇದೆ ಎಂದು ತಿಳಿದುಕೊಳ್ಳಿ.

ವಿಶ್ವಾಸಿಗಳಾದ ನಾವು ನಿರಾಶೆಯಿಂದ ನಮ್ಮ ಕೈಗಳನ್ನು ಚಾಚದೆ, ಬದಲಾಗಿ, ನಮ್ಮ ಕೈಗಳನ್ನು ಪ್ರಾರ್ಥನೆಯಲ್ಲಿ ಜೋಡಿಸಬೇಕು. ಯಾಕೆಂದರೆ ಅದ್ಭುತಗಳನ್ನು ಬಿಡುಗಡೆ ಮಾಡುವ ಶಕ್ತಿ ಪ್ರಾರ್ಥನೆಯಲ್ಲಿದೆ. ದುಷ್ಟ ಶಕ್ತಿಗಳನ್ನು ಬಂಧಿಸುವ ಅಧಿಕಾರ ಪ್ರಾರ್ಥನೆಗೆ ಇದೆ. ನೀವು ಬೇಡಿಕೊಳ್ಳದ ಕಾರಣ ಪಡೆದುಕೊಳ್ಳಲ್ಲಿಲ್ಲ ಎಂದು ಯಾಕೋಬ ೪-೨ ರಲ್ಲಿ ತಿಳಿಸಿದೆ. ಒಡಕಿನಲ್ಲಿ ನಿಂತುಕೊಳ್ಳಲು ಹಾಗೂ ನಶಿಸುವ ಆತ್ಮಗಳ ಪರವಾಗಿ ನಿಲ್ಲಲ್ಲು ನಾವು ಕರೆಯಲ್ಪಟ್ಟಿದ್ದೇವೆ. ನಮ್ಮ ಹೋರಾಟ ಮನುಷ್ಯ ಮಾತ್ರದವರ ಸಂಗಡವಲ್ಲ; ಆಕಾಶ ಮಂಡಲದ ಅಂಧಕಾರದಲ್ಲಿರುವ ದುರಾತ್ಮ ಸೇನೆಯ ಮೇಲೆ. ಎಲ್ಲಾ ನಾಮಗಳಲ್ಲಿ ಶ್ರೇಷ್ಠವಾದ ನಾಮದಲ್ಲಿ (ಯೇಸುವಿನ) ಆ ಎಲ್ಲಾ ಸೇನೆಗಳಿಗೆ ವಿರೋಧವಾಗಿ ಮುನ್ನುಗ್ಗುತ್ತೇವೆ.


ಬಲ


ಪರಿಹಾರ

ಬೀದಿ ಪ್ರಾರ್ಥನೆ ಸಾಮನ್ಯ ಮುನ್ನಡೆಯಾಗಿದೆ. ವಿಶ್ವಾಸಿಗಳಾದ ನೀವು ನಿಮ್ಮ ಬೀದಿ, ಸಮಾಜಕ್ಕಾಗಿ ಪ್ರಾರ್ಥಿಸಲು ಒಪ್ಪಿಸಿಕೊಡಿ. ಈ ಪ್ರಾರ್ಥನಾವಿಧಿಯು (ನಿಯಮ) ಬಹಳ ಸರಳವಾದದ್ದು. ಇದು ಅಸಾಮಾನ್ಯವಾದದ್ದು. ಇದು ರೂಪಾಂತರಗೊಳಿಸುವಂಥದು. ಸೃಷ್ಠಿ ನಿಯಮಕ್ಕೆ ಮಿಗಿಲಾದದು. ಪ್ರತಿಯೊಬ್ಬ ವಿಶ್ವಾಸಿಯು ಈ ಸವಾಲನ್ನು ಅಂಗೀಕರಿಸುವುದಾದರೆ, ಪರಿಣಾಮವಾಗಿ ನಮ್ಮ ರಾಜ್ಯ, ದೇಶ, ಪ್ರಪಂಚವೇ ಪ್ರಾರ್ಥನೆ ಎಂಬ ವಜ್ರಕವಚ ಹೊದಿಸಿಕೊಳ್ಳುತ್ತದೆ. ಬೀದಿ ಪ್ರಾರ್ಥನೆ ಮಾಡಲು ಒಪ್ಪಿಸಿಕೊಡಿ (ಸಹಿ- ಮಾಡಿರಿ). ನೀವು ನಿಮ್ಮ ಜವಾಬ್ದಾರಿಯನ್ನು ಮಾಡುವಾಗ ದೇವರು ತನ್ನ ಕಾರ್ಯವನ್ನು ಮಾಡುವನು. ನಿಮ್ಮ ಪರಿಸರದಲ್ಲಿ ಅದ್ಭುತಗಳನ್ನು ಸಾಕ್ಷೀಕರಿಸುತ್ತೀರಿ.

ಒಂದು ಬೀದಿಯನ್ನು ದತ್ತು ತೆಗೆದುಕೊಳ್ಳಿರಿ

ನಿಮ್ಮ ಸಮುದಾಯವನ್ನು ಕ್ರಿಸ್ತನಿಗಾಗಿ ಹಕ್ಕಿನಿಂದ ಕೇಳಿಕೊಳ್ಳಿರಿ.