ಬೀದಿ ಪ್ರಾರ್ಥನೆ ಪ್ರಾರ್ಥನೆ ದೇಶಕ್ಕೆ ಅತಿ ಅವಶ್ಯವಾದದ್ದು, ಆದಾಗ್ಯೂ ಬಹಳವಾಗಿ ಅಸಡ್ಡೆಗೊಳಗಾಗಿದೆ. ಪ್ರಾರ್ಥನೆಯು ಹೃದಯಗಳನ್ನು (ಅಂತರ್ಯಗಳನ್ನು) ಮೃದುಗೊಳಿಸುವುದು ಹಾಗೂ ಸಮಾಜದಲ್ಲಿ ಬದಲಾವಣೆ ತರುವುದು! ಅಶಕ್ತತೆಯನ್ನು ನಾವು ಸುಮ್ಮನೆ ನಿಂತು ನೋಡಿಕೊಡಿರಬೇಕಾಗಿಲ್ಲ, ನಮ್ಮ ಮೊಣಕಾಲುಗಳ ಮೇಲೆ ನಮ್ಮ ಬೀದಿಗಳಿಗಾಗಿ ದೇವರ ಮುಂದೆ ನಿಂತುಕೊಳ್ಳಬಹುದು.
1 ತಿಮೊಥೆ 2:1-4 ರಲ್ಲಿ, ಪೌಲನು ತಿಮೊಥೆ ಮತ್ತು ಮುಂಬರುವ ವಿಶ್ವಾಸಿಗಳನ್ನು ಕುರಿತು “ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾ ಸ್ತುತಿಗಳನ್ನು ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖ ಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ, ಕಾಲಕ್ಷೇಪ ಮಾಡುದಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು ಹಾಗೆ ಮಾಡುವುದು ನಮ್ಮ ರಕ್ಷಕನಾದ ದೇವರು ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುವುದು ಆತನ ಚಿತ್ತವಾಗಿದೆ.” ನಾವು ಉತ್ತೇಜನಗೊಳಿಸಲು ಸಾಧ್ಯವಿರುವ ಪ್ರಾಂತಗಳಲ್ಲಿ ವಿಶ್ವಾಸಿಗಳಾದ ನಾವು ಪ್ರಾರ್ಥಿಸಬೇಕು.
ನಿಮಗೆ ಪ್ರಾರ್ಥನೆಯು ಉತ್ಪಾದಕತೆಯನ್ನು ಬದಲಿಸುತ್ತದೆ ಎಂದು ತೋರಿದರೆ, ಐದು ಗಂಟೆಗಳಲ್ಲಿ ನಾವು ಮಾಡುವುದನ್ನು ದೇವರು ಐದು ಸೆಕೆಂಡುಗಳಲ್ಲಿ ಮಾಡುತ್ತಾರೆ ಎಂಬುವುದನ್ನು ಮರೆಯದಿರಿ.
ಜಾನ್ ಪೈಪರ್• ಇತರರ ಅಗತ್ಯಗಳಿಗಾಗಿ ದೇವರಿಗೆ ವಿಜ್ಞಾಪನೆ ಮಾಡುವುದರಿಂದ ಆತನ ಚಿತ್ತವನ್ನು ನೆರೆವೇರಿಸುತ್ತೇವೆ.
• ನಶಿಸುವ ಆತ್ಮಗಳ ಕುರಿತು ನಮಗೊಂದು ದರ್ಶನ ಉಂಟಾಗುತ್ತದೆ.
• ನೆರೆಹೊರೆಯವರನ್ನು ಸಂಧಿಸುವ ಜವಾಬ್ದಾರಿಯನ್ನು ಚುರುಕುಗೊಳಿಸುತ್ತದೆ.
• ಪ್ರಾರ್ಥನೆಯು, ವಿಶ್ವಾಸಿಗಳನ್ನು ದೇವರ ಹೃದಯದ ಸಮೀಪಕ್ಕೆ ಸೆಳೆಯುತ್ತದೆ.
• ದೇವರ ಯೋಜನೆಗಳನ್ನು, ವಿಶ್ವಾಸಿ ಹಿಂಬಾಲಿಸಲು ಪ್ರಾರ್ಥನೆಯು ಶಕ್ತಿಯನ್ನು ನೀಡುತ್ತದೆ.
• ಸತ್ಯವೇದ ಆಧಾರದ ಪ್ರಾರ್ಥನೆಯಿಂದ ಸೈತಾನನು ನಡುಗುತ್ತಾನೆ.
ನಮ್ಮ ನೆರೆಹೊರೆಯವರು ಹಲವು ಚಟಗಳಿಗೆ, ದುರುಪಯೋಗ, ವಿವಾಹ ವಿಚ್ಛೇಧನ, ವೈಮನಸ್ಸು ಮುಂತಾದವುಗಳಿಂದ ಬಾಧಿತರಾಗಿರುತ್ತಾರೆ. ನಮ್ಮ ಬೀದಿಗಳಲ್ಲಿ ಜನರು ಪಾಪ ಮತ್ತು ವ್ಯಸನದಿಂದ ಕುಗ್ಗಿದ ಪರಿಸ್ಧಿತಿಯಲ್ಲಿರುತ್ತಾರೆ. ವಿಶ್ವಾಸಿಗಳಾದ ನಾವು ಈ ಪರಿಸ್ಧಿತಿ ವಿಮೋಚನೆಗೆ ದೂರವಾಗಿರುವದೆಂದು ಸುಳ್ಳು ವದಂತಿಯನ್ನು ನಂಬಿರುತ್ತೇವೆ. ನಾವು ಬಿಟ್ಟು ಕೊಟ್ಟವರೂ, ನಿರೀಕ್ಷೆಯನ್ನು ಕಳಕೊಂಡವರೂ, ಉದಾಸೀನರಾಗಿರುತ್ತೇವೆ. ಅನೇಕ ಸಾರಿ ನಮ್ಮ ಪ್ರಾರ್ಥನಾ ಜೀವಿತ ಮತ್ತು ನಮ್ಮ ಕುಟುಂಬದ ಅಗತ್ಯಗಳು, ಸ್ವ ಚಿಂತನೆಯಿಂದ ಕೂಡಿದವುಗಳಾಗಿರುತ್ತದೆ, ಆದರೆ ಅವರಿಗಾಗಿ ನಿಂತುಕೊಳ್ಳಲು ಸಾಧ್ಯವೊ?
“ನಾವು ಹೋರಾಡುವುದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ. ಈ
ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲದ ದುರಾತ್ಮ ಸೇನೆಗಳ ಮೇಲೆಯೂ, ನಾವು
ಹೋರಾಡುವವರಾಗಿದ್ದೇವೆ” – ಎಫೆಸ 6:12
ಹೋರಾಟ ಹಾಗೂ ಪಾಪ, ಕತ್ತಲೆ ಹಾಗೂ ವೈಷಮ್ಯಗಳನ್ನು ಪ್ರತಿದಿನವೂ ನೋಡುತ್ತಿದ್ದೇವೆ. ನಾವು ಗ್ರಹಿಸಲು
ಸಾಧ್ಯವಾಗದ ಸಂಗತಿಗಳು, ನಾವು ನೋಡಲಾರದ ಸಂಗತಿಗಳು, ನಮ್ಮ ಸುತ್ತಲೂ ಜಾಲದಂತೆ ಹೆಣೆದುಕೊಂಡಿವೆ. ಪ್ರತಿ ದಿನವು
ಜನರನ್ನು ಪ್ರೋತ್ಸಾಹಿಸುವ ಅಂಧಕಾರ ಶಕ್ತಿಗಳು ಕಣ್ಣಿಗೆ ಕಾಣದಂತವುಗಳಾಗಿದ್ದರೂ, ನಿಜವಾಗಿರುತ್ತವೆ.
ಎಫೆಸ 2:2 “ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ” ಎಂದು ಸ್ವಷ್ಟವಾಗಿ ಓದುತ್ತೇವೆ. ವಾತಾವರಣವನ್ನು ಶುದ್ಧೀಗೊಳಿಸುವ ಅಧಿಕಾರವನ್ನು ದೇವರು ನಮಗೆ ಕೊಟ್ಟಿರುವುದರಿಂದ ಈ ಕಾರ್ಯ ನಮ್ಮ ಪಾಲಾಗಿದೆ.
• ಪ್ರಾರ್ಥನಾ ವೀರರು ಕರುಣೆ ತುಂಬಿದ ಹೃದಯದಿಂದ ಪ್ರಾರ್ಥಿಸುವವರು.
• ಅಸಾಧ್ಯವಾದವುಗಳನ್ನು, ಸಾಧ್ಯವಾಗುವಂತೆ ಪ್ರಾರ್ಥಿಸುವವರು.
• ಆತ್ಮಭಾರದಿಂದ ಪ್ರಾರ್ಥಿಸುವವರು.
• ಯಾವುದೇ ಸಂಗತಿ ಹಾಗೂ ಎಲ್ಲಾ ವಿಷಯಗಳಿಗಾಗಿ ಪ್ರಾರ್ಥಿಸುವವರು.
• ಅವರು ಪ್ರತ್ಯೇಕವಾಗಿಯೂ, ನಿರ್ಧಿಷ್ಟವಾಗಿಯೂ ಪ್ರಾರ್ಥಿಸುವವರು.
• ಅವರ ಮನಸ್ಸನ್ನು ಆವರಿಸಿರುವ ಮಂಕುತನದಿಂದ ಬಿಡುಗಡೆಯಾಗಲು ಪ್ರಾರ್ಥಿಸಿರಿ.
• ಕತ್ತಲೆಯಿಂದ ವಾಕ್ಯದ ಬೆಳಕಿದ ಬರುವಂತೆ ಪ್ರಾರ್ಥಿಸಿರಿ.
• ಅವಿಧೇಯತೆಯ ಆತ್ಮದಿಂದ ಬಿಡುಗಡೆಯಾಗಲು ಪ್ರಾರ್ಥಿಸಿರಿ.
• ಕಠಿಣ ಮನಸ್ಸಿನಿಂದ ತಿರುಗಿಕೊಂಡು ದೇವರನ್ನು ಸಂಧಿಸುವಂತೆ ಪ್ರಾರ್ಥಿಸಿರಿ.
ದೇವರ ಚಿತ್ತಾನುಸಾರವಾಗಿ ನಾವು ಪ್ರಾರ್ಥಿಸುವಾಗ ಯಾವಾಗಲೂ ಆತನಿಂದ ಉತ್ತರ ಪಡೆದುಕೊಳ್ಳುತ್ತೇವೆ. ನಿಮ್ಮ ಮನೆಗಳಲ್ಲಿಯೇ ಪ್ರತಿ ದಿನ ನಿರ್ಧಿಷ್ಟ ಸಮಯದಲ್ಲಿ ನಿಮ್ಮ ಬೀದಿಯಲ್ಲಿರುವವರಿಗಾಗಿ ಪ್ರಾರ್ಥಿಸಿ. ಪ್ರಾರ್ಥನೆಯು ಮನಸ್ಸಿನ ಪ್ರತಿಕ್ರಿಯೆ – ಎಂಬುದಾಗಿ ಶ್ರೀ. ಆಸ್ವಾಲ್ಡ್ ಚೆಂಬಂರ್ ಹೇಳಿದ್ದಾರೆ. ನಿಮ್ಮ ಪ್ರಾರ್ಥನೆ ದೇವರ ಬಲದಿಂದ ಕೈಗೂಡುವಾಗ, ಅದರ ಫಲವೇ “ರೂಪಾಂತರ”. 2 ಪೂರ್ವಕಾಲ 7:14 – “ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವುದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು.”
ಅವರ ಆರೋಗ್ಯ, ಬಲ ಹಾಗೂ ಸಂರಕ್ಷಣೆಗಾಗಿ ಪ್ರಾರ್ಥಿಸಿರಿ.
ದೇವರು ಅವರ ಕೆಲಸವನ್ನು ಆಶೀರ್ವದಿಸಿ ಅಗತ್ಯಗಳನ್ನೆಲ್ಲಾ ಒದಗಿಸಲು ಪ್ರಾರ್ಥಿಸಿರಿ.
ಪ್ರೀತಿ, ಸಮಾಧಾನ ಹಾಗೂ ಸುಖ ಜೀವನ ನೀಡಲು.
ಕುಟುಂಬ ಹಾಗೂ ಸ್ನೇಹಿತರೊಂದಿಗೆ, ಹಿತಕರ ಸಂಬಂಧವಿರುವಂತೆ (ಅಥವಾ) ದೇವರಿಂದ ಉತ್ತಮ ಸ್ನೇಹಿತರನ್ನು ಪಡೆದುಕೊಳ್ಳಲು.
ಅಂಧಕಾರ ಶಕ್ತಿಗಳು ಹಾಗೂ ವಾಯು ಮಂಡಲದ ಅಧಿಪತಿಯ ಸಾಮರ್ಥ್ಯ ಅವರ ಬೀದಿಗಳಲ್ಲಿ ಅಳಿದುಹೋಗಲು.